ಮೇಲಿಂದ ಮೇಲೆ ಕೇಳುವ ಪ್ರಶ್ನೆಗಳು

ಉತ್ತರ

ನೀವು ಉಪಯೋಗಿಸುವ ಒಂದು ಡಿವೈಸ್* (ಮತ್ತು ಒಂದು ವೆಬ್ ಬ್ರೌಸರ್) ಆಯ್ಕೆ ಮಾಡಿ, ಎಂಪಿಎನ್10 ಸೈಟ್ ಗೆ ಪ್ರವೇಶಿಸುವಾಗ ಯಾವಾಗಲೂ ಈ ಡಿವೈಸ್ ಹಾಗೂ ಬ್ರೌಸರ್ ಉಪಯೋಗಿಸಿ.

ನಿಮ್ಮ ರೋಗಲಕ್ಷಣ ಅಂಕಗಳು ಮತ್ತು ರಕ್ತ ಪರೀಕ್ಷೆ ಫಲಿತಾಂಶಗಳನ್ನು ಒಳಗೊಂಡು ನೀವು ನಮೂದಿಸುವ ಎಲ್ಲ ದತ್ತಾಂಶಗಳು ನೀವು ಉಪಯೋಗಿಸುತ್ತಿರುವ ಡಿವೈಸ್ ನಲ್ಲಿ ಶೇಖರಿಸಲಾಗುತ್ತವೆ†.

ನಿಮ್ಮ ಬ್ರೌಸಿಂಗ್ ದತ್ತಾಂಶವನ್ನು ಡಿಲೀಟ್ ಮಾಡಬೇಡಿ; ಇದು ನಿಮ್ಮ ಹಿಂದಿನ ನಮೂದುಗಳನ್ನು ಡಿಲೀಟ್ ಮಾಡುತ್ತದೆ. ಇದರರ್ಥ ನೀವು ಉಪಯೋಗಿಸುವ ಬ್ರೌಸರ್ ಹಿಸ್ಟರಿಯನ್ನು ನೀವು ಅಳಿಸಬಾರದು; ಇಲ್ಲದಿದ್ದರೆ ನೀವು ಈ ಹಿಂದೆ ನಮೂದಿಸಿದ ದತ್ತಾಂಶಗಳನ್ನು ಕಳೆದುಕೊಳ್ಳುತ್ತೀರಿ.

*ಡಿವೈಸ್, ಅಂದರೆ ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಅಥವಾ ಕಂಪ್ಯೂಟರ್.

† ಶೇಖರಿಸಿದ ಅಥವಾ ಸ್ಟೋರ್ ಮಾಡಿದ, ಅಂದರೆ ನಿಮ್ಮ ಹಿಂದಿನ ನಮೂದುಗಳನ್ನು ನೋಡಲು ನೀವು ಯಾವಾಗಲೂ ಒಂದೇ ಡಿವೈಸ್ ಅನ್ನು ಮತ್ತು ವೆಬ್ ಬ್ರೌಸರ್ ಅನ್ನು ಉಪಯೋಗಿಸಬೇಕು.

ಗಮನಿಸಿ: ನಿಮ್ಮ ವೈಯಕ್ತಿಕ ಆರೋಗ್ಯ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಇಮೇಲ್ ಆಯ್ಕೆ ಮೂಲಕ ಹಂಚಿಕೊಳ್ಳುವವರೆಗೆ ಅದು ನಿಮ್ಮ ಡಿವೈಸ್ ನಲ್ಲಿ ಮಾತ್ರ ಇರುತ್ತದೆ.

ಉತ್ತರ

ನೀವು ಎಷ್ಟು ಸಲ ಬೇಕಾದರೂ ನಿಮ್ಮ ಪಿವಿ ಟ್ರಾಕರ್ ಅನ್ನು ಉಪಯೋಗಿಸಬಹುದು ಮತ್ತು ನಿಮ್ಮ ರೋಗವನ್ನು ಪರಿಣಾಮಕಾರಿಯಾಗಿ ಗಮನಿಸಬಹುದು ಮತ್ತು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಸಂಪರ್ಕದಲ್ಲಿರಬಹುದು. ಉದಾಹರಣೆಗಾಗಿ, ನೀವು ಹೊಸದಾಗಿ ರೋಗಪತ್ತೆಯಾಗಿದ್ದರೆ ಅಥವಾ ಇತ್ತೀಚೆಗೆ ಚಿಕಿತ್ಸೆಯಲ್ಲಿ ಬದಲಾವಣೆ ಅನುಭವಿಸಿದ್ದರೆ, ನಿಮ್ಮ ರೋಗಲಕ್ಷಣಗಳಿಗೆ ಮೇಲಿಂದ ಮೇಲೆ ಅಂಕ ನೀಡಬಯಸಬಹುದು.

ಉತ್ತರ

ವಿಶ್ವ ಆರೋಗ್ಯ ಸಂಸ್ಥೆಯು 2008 ರಿಂದ ಎಂಪಿಎನ್ ಗಳನ್ನು ಕ್ಯಾನ್ಸರ್ ಗಳೆಂದು ವ್ಯಾಖ್ಯಾನಿಸಿದೆ. ಆದರೂ, ರೋಗಲಕ್ಷಣಗಳು ಮತ್ತು ರೋಗನಿದಾನಗಳು ದೊಡ್ಡ ಪ್ರಮಾಣದಲ್ಲಿ ವಿಭಿನ್ನವಾಗಿರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ.

ಉತ್ತರ

ಎಸ್ಎಸ್ ಎಂದರೆ ನೀವು ಎಂಪಿಎನ್10 ರೋಗಲಕ್ಷಣ ಟ್ರಾಕರ್ ನಲ್ಲಿ ನಮೂದಿಸಿದ ವೈಯಕ್ತಿಕ ರೋಗಲಕ್ಷಣ ಅಂಕಗಳನ್ನು ಸೇರಿಸುವ ಮೂಲಕ ಲೆಕ್ಕ ಮಾಡಲಾಗುವ 0 ಮತ್ತು 100 ರ ನಡುವಿನ ಸಂಖ್ಯಾ ಮೌಲ್ಯವಾಗಿದೆ. ಅಧಿಕ ಟಿಎಸ್ಎಸ್ ಅಧಿಕ ತೀವ್ರ ರೋಗಲಕ್ಷಣ ಸೂಚಿಸಬಹುದಾಗಿದ್ದು, ಈ ಸಂಖ್ಯೆಯೊಂದೇ ನಿಮ್ಮ ಇಡೀ ಆರೋಗ್ಯದ ಸಂಪೂರ್ಣ ಚಿತ್ರಣ ನೀಡುವುದಿಲ್ಲ. ನಿಮ್ಮ ಟಿಎಸ್ಎಸ್ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಆತಂಕಗಳನ್ನು ಹೊಂದಿದ್ದರೆ ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಮಾತನಾಡಿ.

ಉತ್ತರ

ಪಿವಿ ಯಂತಹ ದೀರ್ಘಾವಧಿಯ ಸ್ಥಿತಿಯೊಂದಿಗೆ ಬದುಕುತ್ತಿರುವಾಗ, ನೀವು ನಿಮ್ಮ ರೋಗಲಕ್ಷಣಗಳನ್ನ ಮೇಲ್ವಿಚಾರಿಸುವಲ್ಲಿ ಮತ್ತು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಬದಲಾವಣೆಗಳನ್ನು ಚರ್ಚಿಸುವಲ್ಲಿ ನೀವು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಿಮ್ಮ ಯಾವುದೇ ರೋಗಲಕ್ಷಣಗಳು ಉಲ್ಬಣಿಸಿದರೆ ಅಥವಾ ನಿಮಗೆ ಹೆಚ್ಚು ಸವಾಲಿನವಾಗಿದ್ದರೆ ನಿಮ್ಮ ಆರೋಗ್ಯ ಕಾಳಜಿದಾತರಿಗೆ ತಿಳಿಸಿ, ಏಕೆಂದರೆ ಇದು ಪರ್ಯಾಯ ಆರೈಕೆ ನಿರ್ವಹಣೆಯ ಅಗತ್ಯವಿರುವುದನ್ನು ಸೂಚಿಸಬಹುದು.

ಈ ಕೆಳಗಿನ ಪ್ರಶ್ನೆಗಳು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ರೋಗಲಕ್ಷಣಗಳನ್ನು ಚರ್ಚಿಸಲು ನಿಮಗೆ ಸಹಾಯ ಮಾಡಬಹುದು:

  • ನನ್ನ ರೋಗಲಕ್ಷಣಗಳನ್ನು ಗಮನಿಸುವುದು ಅಥವಾ ಮೇಲ್ವಿಚಾರಿಸುವುದು ಏಕೆ ಮುಖ್ಯವಾಗಿರುತ್ತದೆ?

  • ಕೆಲವು ರೋಗಲಕ್ಷಣಗಳು ಇತರ ರೋಗಲಕ್ಷಣಗಳಿಗಿಂತ ಪ್ರಮುಖವಾಗಿದ್ದು, ಅವುಗಳನ್ನು ಹೆಚ್ಚು ನಿಕಟವಾಗಿ ಗಮನಿಸಬೇಕಾಗುತ್ತದೆಯೇ?

  • ರೋಗಲಕ್ಷಣಗಳಾಗಲು ನನ್ನ ಪಿವಿ ಕಾರಣ ಅಥವಾ ಅಲ್ಲ ಎಂಬುದನ್ನು ನಾನು ಹೇಗೆ ಹೇಳಬಹುದು?

  • ನನ್ನ ರೋಗಲಕ್ಷಣಗಳು ಪರಿಹಾರವಾಗುತ್ತವೆ ಎಂಬುದರ ಅರ್ಥ ಏನಾಗಿರಬಹುದು?

  • ನಾನು ನನ್ನ ರೋಗಲಕ್ಷಣಗಳನ್ನು ಹೆಚ್ಚು ಉತ್ತಮವಾಗಿ ಹೇಗೆ ನಿರ್ವಹಿಸಬಹುದು ಅಥವಾ ಗಮನಿಸಬಹುದು?

  • ನನ್ನ ಪಿವಿ ಮತ್ತು ನನ್ನ ನಿರ್ವಹಣಾ ಆಯ್ಕೆಗಳ ಸ್ಥಿತಿಯ ಬಗ್ಗೆ ನನ್ನ ಉಲ್ಬಣಿಸುತ್ತಿರುವ, ಅಥವಾ ಬೆಳೆಯುತ್ತಿರುವ, ರೋಗಲಕ್ಷಣಗಳು ನನಗೆ ಏನು ಸೂಚಿಸುತ್ತಿರಬಹುದು?

ಉತ್ತರ

ನಿಮ್ಮ ಪರೀಕ್ಷೆಗಳನ್ನು ಎಲ್ಲಿ ನಡೆಸಲಾಗುತ್ತದೆ ಎಂಬುದನ್ನು ಆಧರಿಸಿ ನಿಮ್ಮ ಪ್ರಯೋಗಾಲಯ ಪರೀಕ್ಷೆಗಳು ವಿಭಿನ್ನವಾಗಿರಬಹುದು. ನಿಮ್ಮ ಫಲಿತಾಂಶಗಳನ್ನು ಹೇಗೆ ಓದಬೇಕು ಎಂದು ತಿಳಿಯಲು ನಿಮಗೆ ಸಹಾಯ ಮಾಡುವಂತೆ ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಮಾತನಾಡಿ.

ಉತ್ತರ

ನಿಮ್ಮ ರಕ್ತ ಎಣಿಕೆಗಳು ಮುಖ್ಯವಾಗಿ ಹೀಮಾಟೊಕ್ರಿಟ್ (ಎಚ್ ಸಿಟಿ), ಬಿಳಿ ರಕ್ತ ಕಣಗಳು (ಡಬ್ಲ್ಯೂಬಿಸಿ ಗಳು), ಹೀಮೊಗ್ಲೋಬಿನ್ (ಎಚ್ ಜಿಬಿ), ಮತ್ತು ಪ್ಲೇಟ್ಲೆಟ್ ಗಳು ನಿಮ್ಮ ಪಿವಿ ಸ್ಥಿತಿಯ ಬಗ್ಗೆ ಮುಖ್ಯ ಮಾಹಿತಿಯನ್ನು ಒದಗಿಸುತ್ತವೆ. ಪ್ರತಿಯೊಂದು ರಕ್ತ ಪರೀಕ್ಷೆ ನಂತರ ನಿಮ್ಮ ಫಲಿತಾಂಶಗಳ ಬಗ್ಗೆ ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಮಾತನಾಡಿ ಮತ್ತು ನಿಮ್ಮ ವೈಯಕ್ತಿಕ ರಕ್ತ ಫಲಿತಾಂಶಗಳು ಹೇಗೆ ನಿಮ್ಮ ಉದ್ದೇಶಿತ ರಕ್ತ ಮಟ್ಟಗಳೊಂದಿಗೆ ಹೋಲಿಕೆಯಾಗುತ್ತವೆ ಎಂಬುದನ್ನು ಚರ್ಚಿಸಿ.

ಈ ಕೆಳಗಿನ ಪ್ರಶ್ನೆಗಳು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ರಕ್ತ ಎಣಿಕೆಗಳನ್ನು ಚರ್ಚಿಸಲು ನಿಮಗೆ ಸಹಾಯ ಮಾಡಬಹುದು:

  • ಎಚ್ ಸಿ ಟಿ ಮತ್ತು ಡಬ್ಲ್ಯೂ ಬಿ ಸಿ ಗಳಿಗಾಗಿ ನನ್ನ ಉದ್ದೇಶಿತ ಮಟ್ಟಗಳೇನು>

  • ನನ್ನ ಎಚ್ ಸಿ ಟಿ ಅಥವಾ ಡಬ್ಲ್ಯೂ ಬಿ ಸಿ ಗಳು ಉದ್ದೇಶಿತ ಮಟ್ಟಕ್ಕಿಂತ ಹೆಚ್ಚಾಗಿದ್ದರೆ ನನ್ನ ನಿರ್ವಹಣೆಯ ಆಯ್ಕೆಗಳೇನು>

  • ನನ್ನ ರಕ್ತ ಪರೀಕ್ಷೆ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಹುದಾದ ಇತರ ಅಂಶಗಳಾವುವು?

  • ಪಿವಿ ಯನ್ನು ನಿಯಂತ್ರಣದಲ್ಲಿಡುವುದಕ್ಕಾಗಿ ನನ್ನ ರಕ್ತ ಕಣಗಳ ಎಣಿಕೆಯನ್ನು ಮೇಲ್ವಿಚಾರಿಸುವುದು ಏಕೆ ಮುಖ್ಯವಾಗಿರುತ್ತದೆ?

  • ನನ್ನ ರಕ್ತ ಕಣಗಳ ಎಣಿಕೆ ಉದ್ದೇಶಿತ ಮಟ್ಟಕ್ಕಿಂತ ಹೆಚ್ಚಾಗಿವೆಯೇ ಎಂಬುದನ್ನು ತಿಳಿಯುವುದು ಏಕೆ ಮುಖ್ಯವಾಗಿರುತ್ತದೆ?

ಉತ್ತರ

ಫ್ಲೆಬೊಟೊಮಿ ಎಂಬ ಪದವನ್ನು ಸಾಮಾನ್ಯವಾಗಿ ರಕ್ತ ತೆಗೆದುಕೊಳ್ಳುವಿಕೆ ಕಾರ್ಯವಿಧಾನವನ್ನು ಉಲ್ಲೇಖಿಸಲು ಉಪಯೋಗಿಸಲಾಗುತ್ತದೆ. ಇದನ್ನು ಶಸ್ತ್ರಿಚಿಕಿತ್ಸೆ ಮೂಲಕ ರಕ್ತನಾಳ ತೆರೆಯುವ ಪ್ರಕ್ರಿಯೆ ಎಂದೂ ಉಲ್ಲೇಖಿಸಲಾಗುತ್ತದೆ. ನಿಮ್ಮ ರಕ್ತದಲ್ಲಿ ಕೆಂಪು ರಕ್ತ ಕಣಗಳ ಪ್ರಮಾಣವನ್ನು ಕಡಿಮೆ ಮಾಡಲು ಈ ಕಾರ್ಯವಿಧಾನ ನಡೆಸಲಾಗುತ್ತದೆ ಮತ್ತು ಇದು ನಿಮ್ಮ ಹೀಮಾಟೊಕ್ರಿಟ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಫ್ಲೆಬೊಟೊಮಿ ಕಾರ್ಯವಿಧನಕ್ಕೆ ಒಳಗಾಗುವ ಮೊದಲು ನಿಮ್ಮ ಆರೋಗ್ಯ ಕಾಳಜಿದಾತರು ಸ್ವಲ್ಪ ಸಲಹೆ ನೀಡಲು ಸಾಧ್ಯವಾಗಬಹುದು:

  • ನಿರ್ಜಲೀಕರಣ ತಪ್ಪಿಸಲು ಕಾರ್ಯವಿಧಾನಕ್ಕೆ ಮೊದಲು ಮತ್ತು ನಂತರ ನೀರು ಕುಡಿಯಿರಿ

  • ಕಾರ್ಯವಿಧಾನಕ್ಕೆ ಮೊದಲು ಕೆಫೀನ್ ಇರುವ ಪಾನೀಯಗಳನ್ನು ಸೇವಿಸಬೇಡಿ

  • ಸ್ನೇಹಿತರನ್ನು ಅಥವಾ ನಿಮಗೆ ಹತ್ತಿರವಾದವರನ್ನು ನಿಮ್ಮೊಂದಿಗೆ ಕರೆದೊಯ್ಯಿರಿ

ಉತ್ತರ

ಫ್ಲೆಬೊಟೊಮಿಗಳು ಎಚ್ ಸಿ ಟಿ ಮಟ್ಟಗಳನ್ನು ನಿರ್ವಹಿಸಲು ಸಹಾಯ ಮಾಡುವ ಪರಿಣಾಮಕಾರಿ ವಿಧಾನವಾಗಿವೆ. ನಿಮಗೆ ಕಾರ್ಯವಿಧಾನಗಳು ಅನಾನುಕೂಲವೆನಿಸಿದರೆ ಅಥವಾ ನೀವು ಯಾವುದೇ ಅಡ್ಡಪರಿಣಾಮಗಳನ್ನು ಅನುಭವಿಸುತ್ತಿದ್ದರೆ, ನೀವು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಪರ್ಯಾಯ ಕಾಳಜಿನಿರ್ವಹಣೆಯ ಆಯ್ಕೆಗಳನ್ನು ಚರ್ಚಿಸಲು ಇಷ್ಟಪಡಬಹುದು.

ಫ್ಲೆಬೊಟೊಮಿಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಾಗಿದ್ದರೆ ನೀವು ನಿಮ್ಮ ನಿರ್ವಹಣೆಯ ಯೋಜನೆ ಬಗ್ಗೆ ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಚರ್ಚಿಸಲು ಇಷ್ಟಪಡಬಹುದು.

ಈ ಕೆಳಗಿನ ಪ್ರಶ್ನೆಗಳು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ಫ್ಲೆಬೊಟೊಮಿಗಳನ್ನು ಚರ್ಚಿಸಲು ನಿಮಗೆ ಸಹಾಯ ಮಾಡಬಹುದು:

  • ಫ್ಲೆಬೊಟೊಮಿಗಳು ಏಕೆ ನನ್ನ ಪಿವಿ ಚಿಕಿತ್ಸಾ ಯೋಜನೆಯ ಭಾಗವಾಗಿವೆ?

  • ನನ್ನ ಉದ್ದೇಶಿತ ರಕ್ತ ಎಣಿಕೆ ಮಟ್ಟಗಳನ್ನು ಕಾಪಾಡಿಕೊಳ್ಳಲು ನಾನು ಎಷ್ಟು ಸಲ ಫ್ಲೆಬೊಟೊಮಿ ಹೊಂದಬೇಕು?

  • ಫ್ಲೆಬೊಟೊಮಿ ಭೇಟಿಯ ವೇಳೆ ನಾನು ಹೆಚ್ಚು ರಕ್ತ ನೀಡಬೇಕಾಗುವುದು ಎಂಬುದರ ಅರ್ಥವೇನು?

  • ನನ್ನ ಪಿವಿ ಮತ್ತು ನನ್ನ ನಿರ್ವಹಣಾ ಆಯ್ಕೆಗಳ ಸ್ಥಿತಿಯ ಬಗ್ಗೆ ಮೇಲಿಂದ ಮೇಲೆ ಅಥವಾ ನಿಯಮಿತ ಫ್ಲೆಬೊಟೊಮಿಗಳ ಹೆಚ್ಚಿನ ಅಗತ್ಯವಿರಬಹುದು ಎಂಬುದು ನನಗೆ ಏನು ಹೇಳುತ್ತದೆ?

ಉತ್ತರ

  • ನನ್ನ ಪ್ರಸ್ತುತ ರೋಗ-ನಿರ್ವಹಣೆ ಯೋಜನೆಯು ನನ್ನ ರೋಗಲಕ್ಷಣಗಳನ್ನು ನಿಯಂತ್ರಿಸಲು ಹೇಗೆ ಸಹಾಯ ಮಾಡುತ್ತದೆ?

  • ನನ್ನ ರಕ್ತ ಎಣಿಕೆಗಳು ನಾನು ಅನುಭವಿಸುತ್ತಿರುವ ರೋಗಲಕ್ಷಣಗಳಿಗೆ ಹೇಗೆ ಸಂಬಂಧಿಸಿರಬಹುದು?

  • ನನ್ನ ಪಿವಿ- ಸಂಬಂಧಿತ ರೋಗಲಕ್ಷಣಗಳನ್ನು ಕಡಿಮೆ ಮಾಡಲು ನಾನು ಜೀವನಶೈಲಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು?

ಉತ್ತರ

ಪಾಲಿಸಿಥೆಮಿಯಾ ವೆರಾ ಹೊಂದಿರುವ ರೋಗಿಗಳಲ್ಲಿ ರೋಗ ನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುವುದಕ್ಕಾಗಿ ಈ ಟ್ರಾಕರ್ ನಿರ್ಮಾಣವನ್ನು ನೋವಾರ್ಟಿಸ್ ಪ್ರಾಯೋಜಿಸುತ್ತಿದೆ. ಎಂಪಿಎನ್10 ರೋಗಲಕ್ಷಣ ನಿರ್ಧಾರಣೆ ಪತ್ರವನ್ನು ಮನ್ಯಗೊಳಿಸುವುದರಿಂದ ಹಿಡಿದು ಈ ಟ್ರಾಕರ್ ನಲ್ಲಿನ ಹೆಚ್ಚುವರಿ ಕಾರ್ಯಗಳು ಉಪಯುಕ್ತ ಸಂಪನ್ಮೂಲವೆಂದು ಮತ್ತು ಪಿವಿ ಹೊಂದಿರುವ ರೋಗಿಗಳು ತಮ್ಮ ರೋಗವನ್ನು ನಿರ್ವಹಿಸಲು ಸಹಾಯ ಮಾಡುವುದನ್ನು ಖಚಿತಪಡಿಸಿಕೊಳ್ಳಲು ರೋಗಿ ಪ್ರತಿಪಾದನೆ ಸಂಘಟನೆಗಳು ಮತ್ತು ವೈದ್ಯಕೀಯ ತಜ್ಞರೊಂದಿಗೆ ಪಾಲುದಾರಿಕೆ ಹೊಂದಿದೆ. ನೋವಾರ್ಟಿಸ್ ಬಳಕೆದಾರರ ಯಾವುದೇ ವೈಯಕ್ತಿಕ ಅಥವಾ ಗುರುತಿಸುವ ಮಾಹಿತಿಯನ್ನು ಅಥವಾ ಟ್ರಾಕರ್ ನಲ್ಲಿ ನಮೂದಿಸಿದ ಯಾವುದೇ ದತ್ತಾಂಶಗಳನ್ನು ನೋಡುವುದಿಲ್ಲ.

ಈ ವೆಬ್ ಅಪ್ಲಿಕೇಶನ್ ಅನ್ನು ಪಾಲಿಸಿಥೆಮಿಯಾ ವೆರಾ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು

ಈ ಟೂಲ್ ನಿಮ್ಮ ಪಾಲಿಕ್ಥೆಮಿಯಾ ವೆರಾ
(ಪಿವಿ) ಅಂಶಗಳನ್ನು ಗಮನಿಸಲು ಸಹಾಯ
ಮಾಡುತ್ತದೆ, ಈ ಮೂಲಕ ನೀವು ನಿಮ್ಮ
ಆರೋಗ್ಯ ಕಾಳಜಿದಾತರೊಂದಿಗೆ
ಚರ್ಚೆಗಳನ್ನು ಮಾಡಲು ಸಿದ್ಧರಾಗುತ್ತೀರಿ
ಮತ್ತು ಕಾಲಾಂತರದಲ್ಲಿ ನಿಮ್ಮ
ರೋಗದ ಸ್ಥಿತಿಯ ದಾಖಲೆ ಹೊಂದುತ್ತೀರಿ.

ಮಗೆ ಇಷ್ಟವಾದಷ್ಟು ಸಲ ನಿಮ್ಮ
ರೋಗಲಕ್ಷಣದ ತೀವ್ರತೆಯನ್ನ ಅಂಕಿ
ನೀಡಿ ಗುರುತಿಸಿ. ಪ್ರತಿಯೊಂದು
ಕಾರ್ಯವಿಧಾನದ ನಂತರ
ಅಗತ್ಯಕ್ಕನುಗುಣವಾಗಿ ನಿಮ್ಮ
ರಕ್ತ ಪರೀಕ್ಷೆ ಅಥವಾ ಫ್ಲೆಬೊಟೊಮಿ
ಫಲಿತಾಂಶಗಳನ್ನು ನಮೂದಿಸಿ.