ಮೇಲಿಂದ ಮೇಲೆ ಕೇಳುವ ಪ್ರಶ್ನೆಗಳು

ಉತ್ತರ

ನೀವು ಉಪಯೋಗಿಸುವ ಒಂದು ಡಿವೈಸ್* (ಮತ್ತು ಒಂದು ವೆಬ್ ಬ್ರೌಸರ್) ಆಯ್ಕೆ ಮಾಡಿ, ಎಂಪಿಎನ್10 ಸೈಟ್ ಗೆ ಪ್ರವೇಶಿಸುವಾಗ ಯಾವಾಗಲೂ ಈ ಡಿವೈಸ್ ಹಾಗೂ ಬ್ರೌಸರ್ ಉಪಯೋಗಿಸಿ.

ನಿಮ್ಮ ರೋಗಲಕ್ಷಣ ಅಂಕಗಳು ಮತ್ತು ರಕ್ತ ಪರೀಕ್ಷೆ ಫಲಿತಾಂಶಗಳನ್ನು ಒಳಗೊಂಡು ನೀವು ನಮೂದಿಸುವ ಎಲ್ಲ ದತ್ತಾಂಶಗಳು ನೀವು ಉಪಯೋಗಿಸುತ್ತಿರುವ ಡಿವೈಸ್ ನಲ್ಲಿ ಶೇಖರಿಸಲಾಗುತ್ತವೆ†.

ನಿಮ್ಮ ಬ್ರೌಸಿಂಗ್ ದತ್ತಾಂಶವನ್ನು ಡಿಲೀಟ್ ಮಾಡಬೇಡಿ; ಇದು ನಿಮ್ಮ ಹಿಂದಿನ ನಮೂದುಗಳನ್ನು ಡಿಲೀಟ್ ಮಾಡುತ್ತದೆ. ಇದರರ್ಥ ನೀವು ಉಪಯೋಗಿಸುವ ಬ್ರೌಸರ್ ಹಿಸ್ಟರಿಯನ್ನು ನೀವು ಅಳಿಸಬಾರದು; ಇಲ್ಲದಿದ್ದರೆ ನೀವು ಈ ಹಿಂದೆ ನಮೂದಿಸಿದ ದತ್ತಾಂಶಗಳನ್ನು ಕಳೆದುಕೊಳ್ಳುತ್ತೀರಿ.

*ಡಿವೈಸ್, ಅಂದರೆ ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಅಥವಾ ಕಂಪ್ಯೂಟರ್.

† ಶೇಖರಿಸಿದ ಅಥವಾ ಸ್ಟೋರ್ ಮಾಡಿದ, ಅಂದರೆ ನಿಮ್ಮ ಹಿಂದಿನ ನಮೂದುಗಳನ್ನು ನೋಡಲು ನೀವು ಯಾವಾಗಲೂ ಒಂದೇ ಡಿವೈಸ್ ಅನ್ನು ಮತ್ತು ವೆಬ್ ಬ್ರೌಸರ್ ಅನ್ನು ಉಪಯೋಗಿಸಬೇಕು.

ಗಮನಿಸಿ: ನಿಮ್ಮ ವೈಯಕ್ತಿಕ ಆರೋಗ್ಯ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಇಮೇಲ್ ಆಯ್ಕೆ ಮೂಲಕ ಹಂಚಿಕೊಳ್ಳುವವರೆಗೆ ಅದು ನಿಮ್ಮ ಡಿವೈಸ್ ನಲ್ಲಿ ಮಾತ್ರ ಇರುತ್ತದೆ.

ಉತ್ತರ

ನೀವು ಎಷ್ಟು ಸಲ ಬೇಕಾದರೂ ನಿಮ್ಮ ಎಂಪಿಎನ್ ಟ್ರಾಕರ್ ಅನ್ನು ಉಪಯೋಗಿಸಬಹುದು ಮತ್ತು ನಿಮ್ಮ ರೋಗವನ್ನು ಪರಿಣಾಮಕಾರಿಯಾಗಿ ಗಮನಿಸಬಹುದು ಮತ್ತು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಸಂಪರ್ಕದಲ್ಲಿರಬಹುದು. ಉದಾಹರಣೆಗಾಗಿ, ನೀವು ಹೊಸದಾಗಿ ರೋಗಪತ್ತೆಯಾಗಿದ್ದರೆ ಅಥವಾ ಇತ್ತೀಚೆಗೆ ಚಿಕಿತ್ಸೆಯಲ್ಲಿ ಬದಲಾವಣೆ ಅನುಭವಿಸಿದ್ದರೆ, ನಿಮ್ಮ ರೋಗಲಕ್ಷಣಗಳಿಗೆ ಮೇಲಿಂದ ಮೇಲೆ ಅಂಕ ನೀಡಬಯಸಬಹುದು.

ಉತ್ತರ

ವಿಶ್ವ ಆರೋಗ್ಯ ಸಂಸ್ಥೆಯು 2008 ರಿಂದ ಎಂಪಿಎನ್ ಗಳನ್ನು ಕ್ಯಾನ್ಸರ್ ಗಳೆಂದು ವ್ಯಾಖ್ಯಾನಿಸಿದೆ. ಆದರೂ, ರೋಗಲಕ್ಷಣಗಳು ಮತ್ತು ರೋಗನಿದಾನಗಳು ದೊಡ್ಡ ಪ್ರಮಾಣದಲ್ಲಿ ವಿಭಿನ್ನವಾಗಿರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ.

ಉತ್ತರ

ಟಿಎಸ್ಎಸ್ ಎಂದರೆ ನೀವು ಎಂಪಿಎನ್ 10 ರೋಗಲಕ್ಷಣ ಟ್ರಾಕರ್ ನಲ್ಲಿ ನಮೂದಿಸಿದ ವೈಯಕ್ತಿಕ ರೋಗಲಕ್ಷಣ ಅಂಕಗಳನ್ನು ಸೇರಿಸುವ ಮೂಲಕ ಲೆಕ್ಕ ಮಾಡಲಾಗುವ 0 ಮತ್ತು 100 ರ ನಡುವಿನ ಸಂಖ್ಯಾ ಮೌಲ್ಯವಾಗಿದೆ. ಅಧಿಕ ಟಿಎಸ್ಎಸ್ ಅಧಿಕ ತೀವ್ರ ರೋಗಲಕ್ಷಣ ಸೂಚಿಸಬಹುದಾಗಿದ್ದು, ಈ ಸಂಖ್ಯೆಯೊಂದೇ ನಿಮ್ಮ ಇಡೀ ಆರೋಗ್ಯದ ಸಂಪೂರ್ಣ ಚಿತ್ರಣ ನೀಡುವುದಿಲ್ಲ. ನಿಮ್ಮ ಟಿಎಸ್ಎಸ್ ಬಗ್ಗೆ ನೀವು ಯಾವುದೇ ಪ್ರಶ್ನೆಗಳನ್ನು ಅಥವಾ ಆತಂಕಗಳನ್ನು ಹೊಂದಿದ್ದರೆ ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಮಾತನಾಡಿ.

ಉತ್ತರ

ಎಂಎಫ್ ಅಥವಾ ಇಟಿ ಯಂತಹ ದೀರ್ಘಾವಧಿಯ ಸ್ಥಿತಿಯೊಂದಿಗೆ ಬದುಕುತ್ತಿರುವಾಗ, ನೀವು ನಿಮ್ಮ ರೋಗಲಕ್ಷಣಗಳನ್ನ ಮೇಲ್ವಿಚಾರಿಸುವಲ್ಲಿ ಮತ್ತು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಬದಲಾವಣೆಗಳನ್ನು ಚರ್ಚಿಸುವಲ್ಲಿ ನೀವು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಿಮ್ಮ ಯಾವುದೇ ರೋಗಲಕ್ಷಣಗಳು ಉಲ್ಬಣಿಸಿದರೆ ಅಥವಾ ನಿಮಗೆ ಹೆಚ್ಚು ಸವಾಲಿನವಾಗಿದ್ದರೆ ನಿಮ್ಮ ಆರೋಗ್ಯ ಕಾಳಜಿದಾತರಿಗೆ ತಿಳಿಸಿ, ಏಕೆಂದರೆ ಇದು ಪರ್ಯಾಯ ಆರೈಕೆ ನಿರ್ವಹಣೆಯ ಅಗತ್ಯವಿರುವುದನ್ನು ಸೂಚಿಸಬಹುದು.

ಈ ಕೆಳಗಿನ ಪ್ರಶ್ನೆಗಳು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ನಿಮ್ಮ ರೋಗಲಕ್ಷಣಗಳನ್ನು ಚರ್ಚಿಸಲು ನಿಮಗೆ ಸಹಾಯ ಮಾಡಬಹುದು:

  • ನನ್ನ ರೋಗಲಕ್ಷಣಗಳನ್ನು ಗಮನಿಸುವುದು ಅಥವಾ ಮೇಲ್ವಿಚಾರಿಸುವುದು ಏಕೆ ಮುಖ್ಯವಾಗಿರುತ್ತದೆ?

  • ಕೆಲವು ರೋಗಲಕ್ಷಣಗಳು ಇತರ ರೋಗಲಕ್ಷಣಗಳಿಗಿಂತ ಪ್ರಮುಖವಾಗಿದ್ದು, ಅವುಗಳನ್ನು ಹೆಚ್ಚು ನಿಕಟವಾಗಿ ಗಮನಿಸಬೇಕಾಗುತ್ತದೆಯೇ?

  • ರೋಗಲಕ್ಷಣಗಳಾಗಲು ನನ್ನ ಎಂಪಿಎನ್ ಕಾರಣ ಅಥವಾ ಅಲ್ಲ ಎಂಬುದನ್ನು ನಾನು ಹೇಗೆ ಹೇಳಬಹುದು?

  • ನನ್ನ ರೋಗಲಕ್ಷಣಗಳು ಪರಿಹಾರವಾಗುತ್ತವೆ ಎಂಬುದರ ಅರ್ಥ ಏನಾಗಿರಬಹುದು?

  • ನಾನು ನನ್ನ ರೋಗಲಕ್ಷಣಗಳನ್ನು ಹೆಚ್ಚು ಉತ್ತಮವಾಗಿ ಹೇಗೆ ನಿರ್ವಹಿಸಬಹುದು ಅಥವಾ ಗಮನಿಸಬಹುದು?

  • ನನ್ನ ರೋಗ ಮತ್ತು ನನ್ನ ನಿರ್ವಹಣಾ ಆಯ್ಕೆಗಳ ಸ್ಥಿತಿಯ ಬಗ್ಗೆ ನನ್ನ ಉಲ್ಬಣಿಸುತ್ತಿರುವ, ಅಥವಾ ಬೆಳೆಯುತ್ತಿರುವ, ರೋಗಲಕ್ಷಣಗಳು ನನಗೆ ಏನು ಸೂಚಿಸುತ್ತಿರಬಹುದು?

ಉತ್ತರ

  • ನನ್ನ ಪ್ರಸ್ತುತ ರೋಗ-ನಿರ್ವಹಣೆ ಯೋಜನೆಯು ನನ್ನ ರೋಗಲಕ್ಷಣಗಳನ್ನು ನಿಯಂತ್ರಿಸಲು ಹೇಗೆ ಸಹಾಯ ಮಾಡುತ್ತದೆ?

  • ನನ್ನ ಎಂಎಫ್- ಅಥವಾ ಇಟಿ- ಸಂಬಂಧಿತ ರೋಗಲಕ್ಷಣಗಳನ್ನು ಕಡಿಮೆ ಮಾಡಲು ನಾನು ಜೀವನಶೈಲಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬಹುದು?

ಉತ್ತರ

ಎಂಎಫ್ ಅಥವಾ ಇಟಿ ಹೊಂದಿರುವ ರೋಗಿಗಳಲ್ಲಿ ರೋಗ ನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುವುದಕ್ಕಾಗಿ ಈ ಟ್ರಾಕರ್ ನಿರ್ಮಾಣವನ್ನು ನೋವಾರ್ಟಿಸ್ ಪ್ರಾಯೋಜಿಸುತ್ತಿದೆ. ಎಂಪಿಎನ್10 ರೋಗಲಕ್ಷಣ ನಿರ್ಧಾರಣೆ ಪತ್ರವನ್ನು ಮನ್ಯಗೊಳಿಸುವುದರಿಂದ ಹಿಡಿದು ಈ ಟ್ರಾಕರ್ ನಲ್ಲಿನ ಹೆಚ್ಚುವರಿ ಕಾರ್ಯಗಳು ಉಪಯುಕ್ತ ಸಂಪನ್ಮೂಲವೆಂದು ಮತ್ತು ಎಂಎಫ್ ಅಥವಾ ಇಟಿ ಹೊಂದಿರುವ ರೋಗಿಗಳು ತಮ್ಮ ರೋಗವನ್ನು ನಿರ್ವಹಿಸಲು ಸಹಾಯ ಮಾಡುವುದನ್ನು ಖಚಿತಪಡಿಸಿಕೊಳ್ಳಲು ರೋಗಿ ಪ್ರತಿಪಾದನೆ ಸಂಘಟನೆಗಳು ಮತ್ತು ವೈದ್ಯಕೀಯ ತಜ್ಞರೊಂದಿಗೆ ಪಾಲುದಾರಿಕೆ ಹೊಂದಿದೆ. ನೋವಾರ್ಟಿಸ್ ಬಳಕೆದಾರರ ಯಾವುದೇ ವೈಯಕ್ತಿಕ ಅಥವಾ ಗುರುತಿಸುವ ಮಾಹಿತಿಯನ್ನು ಅಥವಾ ಟ್ರಾಕರ್ ನಲ್ಲಿ ನಮೂದಿಸಿದ ಯಾವುದೇ ದತ್ತಾಂಶಗಳನ್ನು ನೋಡುವುದಿಲ್ಲ.

ಈ ವೆಬ್ ಅಪ್ಲಿಕೇಶನ್ ಅನ್ನು ಎಂಎಫ್ ಅಥವಾ ಇಟಿ ರೋಗಿಗಳಿಗಾಗಿ ಒಂದು ಸಂಪನ್ಮೂಲವಾಗಿ ಮತ್ತು ಡೈರಿ ಟ್ರಾಕರ್ ಆಗಿ ಉಪಯೋಗಿಸುವ ಉದ್ದೇಶವಿರುತ್ತದೆ. ಈ ವೆಬ್ ಅಪ್ಲಿಕೇಶನ್ ನ ಪರಸ್ಪರ ಕ್ರಿಯೆಯ ಲಕ್ಷಣಗಳಿಂದ ದೊರೆತ ಫಲಿತಾಂಶಗಳನ್ನು ಒಳಗೊಂಡು ಅದರಲ್ಲಿ ಒದಗಿಸಲಾದ ಮಾಹಿತಿಯನ್ನು ನಿಮ್ಮ ಆರೋಗ್ಯ ಕಾಳಜಿದಾತರ ತಂಡ ನೀಡುವ ವೈದ್ಯಕೀಯ ಅಥವಾ ನಿರ್ವಹಣಾ ಸಲಹೆಗೆ ಪರ್ಯಾಯವೆಂದು ಪರಿಗಣಿಸಬಾರದು.

ಈ ಟೂಲ್ ನಿಮ್ಮ ಪಿವಿ, ಎಂಎಫ್,
ಅಥವಾ ಇಟಿ ಅಂಶಗಳನ್ನು ಗಮನಿಸಲು
ಸಹಾಯ ಮಾಡುತ್ತದೆ, ಈ ಮೂಲಕ
ನೀವು ನಿಮ್ಮ ಆರೋಗ್ಯ
ಕಾಳಜಿದಾತರೊಂದಿಗೆ ಚರ್ಚೆಗಳನ್ನು
ಮಾಡಲು ಸಿದ್ಧರಾಗು
ದಾಖಲೆ ಹೊಂದುತ್ತೀರಿ.

ನಿಮಗೆ ಇಷ್ಟವಾದಷ್ಟು ಸಲ
ನಿಮ್ಮ ರೋಗಲಕ್ಷಣದ ತೀವ್ರತೆಯನ್ನ
ಅಂಕಿ ನೀಡಿ ಗುರುತಿಸಿ.