ನಿಮಗೆ ಮೂಳೆ ಮಜ್ಜೆಯ ಕ್ಯಾನ್ಸರ್ (ಮೈಲೊಫಿಬ್ರೊಸಿಸ್-ಎಂಎಫ್), ಮೂಳೆ ಮಜ್ಜೆ ಅತಿಯಾಗಿ ಕೆಂಪು ರಕ್ತಕಣಗಳನ್ನು ಉತ್ಪಾದಿಸುವಂತೆ ಮಾಡುವ ಒಂದು ಪ್ರಕಾರದ ರಕ್ತ ಕ್ಯಾನ್ಸರ್ (ಪಾಲಿಸೈಥೆಮಿಯಾ ವೆರಾ-ಪಿವಿ), ಅಥವಾ ನಿಮ್ಮ ದೇಹ ಅತಿಯಾಗಿ ಪ್ಲೇಟ್ಲೆಟ್ ಗಳನ್ನು ಉತ್ಪಾದಿಸುವ ಅಸಹಜ ಅಸ್ವಸ್ಥತೆ (ಎಸೆನ್ಶಿಯಲ್ ಥ್ರಾಂಬೊಸೈಥೆಮಿಯಾ-ಇಟಿ) ಇರುವುದು ಪತ್ತೆಯಾಗಿದ್ದರೆ, ನೀವು ನಿಯಮಿತವಾಗಿ ನಿಮ್ಮ ರೋಗಗಳ ಪ್ರಗತಿಯನ್ನು ಗಮನಿಸುವುದು ಎಷ್ಟು ಮುಖ್ಯ ಎಂದು ಈಗಾಗಲೇ ನಿಮಗೆ ತಿಳಿದಿರಬೇಕು. ಇದೆಲ್ಲವನ್ನೂ ದಾಖಲಿಸಿಟ್ಟುಕೊಳ್ಳುವುದರಿಂದ ನಿಮ್ಮ ಆರೋಗ್ಯದಲ್ಲಾಗುವ ಯಾವುದೇ ಬದಲಾವಣೆಗಳನ್ನು ಗುರುತಿಸಲು ಮತ್ತು ನಿಮ್ಮ ಆರೋಗ್ಯ ಕಾಳಜಿದಾತರೊಂದಿಗೆ ಸಂವಾದ ನಡೆಸಲು ಅನುಕೂಲವಾಗುತ್ತದೆ.
ಈ ಗಮನಿಸುವಿಕೆಯ ಅಥವಾ ಟ್ರಾಕ್ ಮಾಡುವ ಟೂಲ್ ಗಳನ್ನು ಅತಿಯಾಗಿ ಕೆಂಪು, ಬಿಳಿ ರಕ್ತ ಕಣಗಳನ್ನು ಮತ್ತು ಪ್ಲೇಟ್ಲೆಟ್ ಗಳನ್ನು ತಯಾರಿಸುವ ಮೂಳೆ ಮಜ್ಜೆಯ ರೋಗಗಳ ಸಮೂಹ (ಮೈಲೊಪ್ರೊಲಿಫರೇಟಿವ್ ನಿಯೊಫ್ಲಾಸಮ್ (ಎಂಪಿಎನ್ ಗಳು)) ಹೊಂದಿರುವ ರೋಗಿಗಳಿಗಾಗಿ ತಯಾರಿಸಲಾಗಿದೆ. ಪರಿಹಾರಗಳನ್ನು ಒಳಗೊಂಡು ಈ ಟೂಲ್ ಗಳಲ್ಲಿ ಒದಗಿಸಲಾದ ಮಾಹಿತಿಯನ್ನು ಆರೋಗ್ಯ ಕಾಳಜಿದಾತರು ನೀಡುವ ಸಲಹೆಗೆ ಪರ್ಯಾಯವೆಂದು ಪರಿಗಣಿಸಕೂಡದು.